Friday, 18 May 2018

ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ.

ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಅನ್ನುವ ಹಾಡು ಕೇಳಿಲ್ಲವ ಹಾಗೆ ಸುಮ್ಮನೆ ನಮ್ಮ  ತೋಚಿರುವ ಇನ್ನೋರ್ವರಿಗೆ ಕೆಡುಕೆನಿಸದಿರುವ ಮಾರ್ಗದಲ್ಲಿ ಸಾಗ್ತಾನೆ ಇರಬೇಕು.

ಹೋಗುವ ಹೈವೆ ರೋಡ್ ನಲ್ಲಿ ಟಾರು ಹಾಕಿದ ಸಮತಟ್ಟಾದ ರಸ್ತೆ ಇದ್ದರೆ ಮಜ ಮರುವುದಿಲ್ಲ. ಮದ್ಯ ಆಗಾಗ ತಗ್ಗು ದಿನ್ನೆಗಳು ಹಂಪ್ಸಗಳು ಬಂದ್ರೆನೆ ಮಜ ಇರೋದು. ಹೈವೆನಲ್ಲಿ ಹಂಪ್ಸ ಯಾಕೆ ಇರ್ತಾವೆ ಹೇಳಿ ಬೈಪಾಸ್ ನಲ್ಲಿ. ವೇಗವಾಗಿ ಹೋಗುವ ವಾಹನ ಸ್ವಲ್ಪ ನಿದಾನವಾಗಲಿ ಯಾಕೆಂದರೆ ಅಪಗಾತವಾಗಬಹುದೆಂಬ ಮುನ್ನಚ್ಚರಿಕೆ ಅಷ್ಟೆ. ಇಲ್ಲಿ ಗಮನಿಸಬೇಕಾದದ್ದು ಏನು ಹಂಪ್ಸಗಳು ನಮ್ಮ ಒಳ್ಳೆಯದಕ್ಕೆ ಅಂದಂಗಾಯಿತು. ಅದನ್ನ ತಿಳಿಯದೆ ಹಂಪ್ಸಗಳನ್ನ ಹಂಪ್ಸಹಾಕಿದವರನ್ನ ಬೈತಾನೆ ಇರ್ತೀವಿ ಅವರು ತಮ್ಮ ಕೆಲಸ ಮಾಡಿದ್ದಾರೆ ಅದು ಪ್ರಯಾಣಿಸುವವರಿಗೆ ಒಳ್ಳೆಯದೇ ಆಗಬಹುದು ಕೆಡುಕು ಆಗಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ. ಆದರೆ ನಾವು ಯಾವ ರೀತಿಯಾಗಿ ಹಂಪ್ಸ ದಾಟುತ್ತೇವೆ ಎಂಬುದು ಇಲ್ಲಿ ಮುಖ್ಯ ನಿದಾನವಾಗಿ ದಾಟಿದರೆ ಮತ್ತೆ ಟಾರು ಹಾಕಿದ ಹೈವೆ, ಸ್ಪೀಡಾಗಿ ದಾಟಿದರೆ ಟಾರೆ ಇಲ್ಲದ ಭಗವಂತನ ಹೈವೆ.


ಹುಸ್ಸೇನ್....

No comments:

Post a Comment