Tuesday 25 December 2018

ಲೈಂಗಿಕತೆ ಮತ್ತು ಯುವ ಜನರ ತಲ್ಲಣಗಳು

ಲೈಂಗಿಕತೆಯ ವಿಷಯವಾಗಿ ಯುವಜನರಲ್ಲಿ ಹರಡಿರುವ ಮೂಢನಂಬಿಕೆಗಳು ಹತ್ತು ಹಲವು. ತಮ್ಮಲ್ಲಿರುವ ವೀರ್ಯವನ್ನು ಹಸ್ತಮೈಥುನದ ಮೂಲಕ ಹೊರಗೆ ಹಾಕಿ ಬಿಡಬಾರದು, ಅದನ್ನು ಹಾಗೇಯೇ ಉಳಿಸಿಕೊಂಡು ಇರಿಸಿಕೊಂಡಿರಬೇಕು.
ಏಕೆಂದೆರೆ ತಾವು ಮುಂದೆ ಮದುವೆಯಾಗಿ ಲೈಂಗಿಕ ಸಂಗಾತಿಯೊಬ್ಬಳನ್ನು ಪಡೆದಾಗ ಮಗುವು ಹುಟ್ಟಲು ಬೇಕಾಗುವುದು ಎಂಬಷ್ಟರ ಮಟ್ಟಿಗಿನ ಅವೈಜ್ಞಾನಿಕ ನಂಬಿಕೆ ಇರುವವರನ್ನೂ ನಾನು ನೋಡಿದ್ದೇನೆ. ಹಾಗಾಗಿ ಸ್ವಲ್ಪ ಸ್ಖಲನವಾದಾಗ ಅಯ್ಯೋ ಮಂದೆ ಹುಟ್ಟಲಿರುವ ತಮ್ಮ ಮಗುವೊಂದು ಈಗಲೇ ಸತ್ತು ಹೋಯಿತೆಂಬಂತೆ ದುಃಖಿತವಾಗುವ ಯುವಜನರನ್ನು ಕಂಡಿದ್ದೇನೆ.

ಹಸ್ತಮೈಥುನದಿಂದಾಗಿ ನರಗಳ ದೌರ್ಬಲ್ಯ ಉಂಟಾಗಿ ನಿಮಿರುವಿಕೆಯ ಸಮಸ್ಯ ಉಂಟಾಗುತ್ತದೆ, ಶಿಶ್ನವು ಕ್ರಮೇಣ ಸಣ್ಣಗಾಗುತ್ತಾ ಹೋಗುತ್ತದೆ, ಶೀಘ್ರ ಸ್ಖಲನ ಉಂಟಾಗುತ್ತದೆ ಹಾಗೂ ಮಕ್ಕಳಾಗುವುದಿಲ್ಲ, ಎಂದು ನಂಬಿ ಸದಾ ಕೀಳರಿಮೆಯಲ್ಲಿ, ಭಯದಲ್ಲಿ ಒದ್ದಾಡುವ ಯುವಕರ ಸಂಖ್ಯೆ ಕಡಿಮೆಯೇನಿಲ್ಲ.
ಅಂಥವರ ಭಯ ಮತ್ತು ಮನೋದೌರ್ಬಲ್ಯವನ್ನು ಬಂಡವಾಳವಾಗಿರಿಸಿಕೊಂಡು ಎಲ್ಲಾ ಖ್ಯಾತ ಪತ್ರಿಕೆಗಳಲ್ಲೂ ನಿಮ್ಮ ಲಿಂಗವನ್ನು ದಪ್ಪನಾಗಿಸುವ ಯಂತ್ರ ಅಥವಾ ಔಷಧಿಯೆಂದೂ, ಇಡೀ ರಾತ್ರಿ ಸುಖಿಸುವ ಔಷಧಿಯೆಂದೂ ಲೈಂಗಿಕ ಆರೋಗ್ಯದ ಪಂಡಿತರು ಅನೇಕ ಜಾಹಿರಾತುಗಳ ಮೂಲಕ ಸೆಳೆಯುತ್ತಾರೆ.

ಇರುವ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಿ ಮಗದಷ್ಟು ಮಂಚ ಮುರಿದುಹೋಗುವಷ್ಟು ಸುಖಿಸುವ ಕನಸು ಕಾಣುತ್ತಲೂ ಅಂತಹ ಜಾಹಿರಾತುಗಳ ಮೇಲೆ ಮಾಡುವವರಿದ್ದಾರೆ.

ಇವುಗಳಿಗೆ ಒಮ್ಮೆ ಫೋನಾಯಿಸಿ ನೋಡಿ. ನಿಮ್ಮ ವಿವರ ಕೇಳುವ ನಾಟಕ ಮಾಡುತ್ತಾರೆ. ನೀವು ಹೇಳುತ್ತೀರಿ. ನಂತರ ಅವರು ನಿಮ್ಮ ಮನೆಯ ವಿಳಾಸಕ್ಕೆ ವಿಪಿಪಿ ಪಾರ್ಸಲ್ ಕಳಿಸಿಕೊಡುತ್ತಾರೆ. ಅದೊಂದು ಪುಟ್ಟ ಕಾರ್ಟನ್ ಅಥವಾ ಆಪಲ್ ವುಡ್ ನ ಬಾಕ್ಸ್ ಆಗಿರುತ್ತದೆ. ಅದರಲ್ಲಿ ಎಂಥದ್ದೋ ಒಂದು ಬಗೆಯ ಎಣ್ಣೆ, ಎರಡು ಮೂರು ಪ್ಲಾಸ್ಟಿಕ್ ಕವರ್ಗಳಲ್ಲಿ ಪುಡಿ ಕಳುಹಿಸಿರುತ್ತಾರೆ. ಅದಕ್ಕೆ ನಾಲ್ಕು ಅಥವಾ ಐದು, ಮಿನಿಮಮ್ ಮೂರು ಸಾವಿರ ಕೊಟ್ಟು ಪಾರ್ಸಲ್ ಬಿಡಿಸಿಕೊಳ್ಳುತ್ತೀರಿ. ನಂತರ ನಿಮಗೆ ಮತ್ತೆ ಫೋನ್ ಬರುತ್ತದೆ. ಈಗ ಕಳುಹಿಸಿರುವ ಔಷಧಿಯನ್ನು ಉಪಯೋಗಿಸಿ  ಅಥವಾ ಎಣ್ಣೆಯನ್ನು ಹಚ್ಚಕೊಳ್ಳಿ ಎಂದು ಹೇಳುತ್ತಾರೆ. ಕೆಲವೊಮ್ಮೆ , ಹಾಗೆ ಮಾಡುವ ಮುನ್ನ ಇನ್ನೊಂದು ಪರಿಕ್ಷೆ ಮಾಡುವ ಸಲುವಾಗಿ ನಿಮ್ಮ ವೀರ್ಯವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಸೀಲ್ ಮಾಡಿ ಕಳುಹಿಸಲು ಹೇಳುತ್ತಾರೆ. ನೀವು  ನಿಮ್ಮ ವೀರ್ಯವನ್ನು ಕಳುಹಿಸುತ್ತೀರಿ. ದುರ್ಬಲ ಮನಸ್ಕರಾದರೆ, ಅಲ್ಲಿಗೆ ಕಥೆ ಮುಗಿತು.

ಅವರ ಮುಂದಿನ ಫೋಬ್ ಬಂದಾಗ , ನೀವು ಒಂದು ಲಿಂಗ ವೈಕಲ್ಯದಿಂದ ಬಳಲುತ್ತಿದ್ದೀರಿ ಎಂಬ ಆಘಾತಕಾರಿ ಸುದ್ದಿ ಹೇಳುತ್ತಾರೆ. ಹಸ್ತಮೈಥುನದಿಂದ ನಿಮ್ಮ ಲಿಂಗದ ನರಗಳು ಸಂಪೂರ್ಣ ದುರ್ಬಲವಾಗಿ ಇನ್ನೇನು ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಕಳಚಿಯೇ ಬಿದ್ದು ಹೋಗುತ್ತದೆ ಎಂಬಂತೆ ವರ್ಣಿಸುತ್ತಾರೆ. ಅದನ್ನು ಗಟ್ಟಿಗೊಳಿಸಲು, ಲಿಂಗವು ಬಿದ್ದು ಹೋಗದಿರಲು, ಉಳಿದ ಜನ್ಮವಿಡೀ ಮಾಡುವ ಎಲ್ಲಾ ಕೆಲಸಗಳನ್ನು ಬಿಟ್ಟು ಹಗಲು ರಾತ್ರಿ, ಒಳಗೆ ಹೊರಗೆ ಸಂಭೋಗದಲ್ಲಿಯೇ ನಿರತವಾಗಿರುವಂತಹ ಅದ್ಬುತವಾದ ಔಷಧವನ್ನು ತಮಗೆ ಕಳುಹಿಸಲು ನೀವು ಕೇವಲ ಇಪ್ಪತ್ತು ಅಥವಾ ಇಪ್ಪತ್ತೆರಡು ಸಾವಿರದ ಔಷಧಿ ಅಥವಾ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸುತ್ತಾರೆ. ನೀವು ನಂಬಿರೋ, ಅಲ್ಲಿಗೆ ಆ ಬ್ಲೇಡ್ ಕಂಪನಿಯ ಉದ್ದೇಶ ಯಶಸ್ವಿಯಾಯಿತೆಂದು!

ಲೈಂಗಿಕತೆಯಲ್ಲಿ ಮುಚ್ಚಿಡುವಂತಹ ನಾಚಿಕೆಯನ್ನು ಅಥವಾ ಅವಮಾನವನ್ನು ಸೃಷ್ಟಿಸಿರುವಂತಹ ಈ ಸಮಾಜದಲ್ಲಿ ನಮ್ಮ ಯುವ ಜನತೆಯು ಮಾನಸಿಕವಾಗಿಯೂ ಮತ್ತು ದೈಹಿಕವಾಗಿಯೂ ಎಷ್ಟೋ ಸಮಸ್ಯಯಿಂದ ಬಳಲುತ್ತದೆ. ನಿಜವಾದ ಲೈಂಗಿಕ ತಜ್ಞರ ಬಳಿಗೆ ಹೋಗುವುದರಿಂದ ನರ ದೌರ್ಬಲ್ಯ ಅಥವಾ ಇತರೇ ಕಾರಣದಿಂದ ಒಂದು ವೇಳೆ ಲೈಂಗಿಕ ಸಮಸ್ಯೆ ಉಂಟಾಗಿದ್ದರೆ ಖಂಡಿತ ಚಿಕಿತ್ಸೆಯು ಬಹಳ ಸರಳವಾಗಿಯೇ ಸಿಗುವುದು. ಆದರೆ ಹಾಗೆ ಹೋಗುವುದು, ಹೇಳುವುದು ಅಪಮಾನಕರ ಎಂದು ಭಾವಿಸುವುದರಿಂದ ಅನೇಕ ಬಾರಿ ಇಂತಹ ಗುಪ್ತ ಚಿಕಿತ್ಸಕರ ಬಳಿಗೆ ಹೋಗುವುದು.

ಬೆವರು, ಕಫದಂತೆಯೇ ವೀರ್ಯವೂ ಅಗತ್ಯವಾಗಿ ವಿಸರ್ಜನೆಯಾಗಲೇ ಬೇಕಾದ ತ್ಯಾಜ್ಯ. ಹಸ್ತಮೈಥುನವೆಂಬುದು ಅತ್ಯಂತ ಸಹಜವಾಗಿರುವಂತಹದ್ದು. ಅದರಿಂದ ಯಾವುದೇ ದೌರ್ಬಲ್ಯಗಳು ಉಂಟಾಗುವುದಿಲ್ಲ ಎಂದೆಲ್ಲಾ ಸೆಕ್ಸಪರ್ಟಗಳು ಅದೆಷ್ಟೇ ಹೇಳಿದರೂ ಫೇಕ್ ಕಂಪನಿಗಳ ದಂಧೆ ನಿರಾತಂಕವಾಗಿ ನಡೆಸುತ್ತಿದ್ದಾರೆ ಎಂದರೆ ಯುವಜನತೆ ವಿಜ್ಞಾನಕ್ಕೆ ತೆರೆದುಕೊಂಡಿಲ್ಲವೆಂದೇ ಅರ್ಥ.

ಹುಸ್ಸೇನ್...

Friday 18 May 2018

ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ.

ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಅನ್ನುವ ಹಾಡು ಕೇಳಿಲ್ಲವ ಹಾಗೆ ಸುಮ್ಮನೆ ನಮ್ಮ  ತೋಚಿರುವ ಇನ್ನೋರ್ವರಿಗೆ ಕೆಡುಕೆನಿಸದಿರುವ ಮಾರ್ಗದಲ್ಲಿ ಸಾಗ್ತಾನೆ ಇರಬೇಕು.

ಹೋಗುವ ಹೈವೆ ರೋಡ್ ನಲ್ಲಿ ಟಾರು ಹಾಕಿದ ಸಮತಟ್ಟಾದ ರಸ್ತೆ ಇದ್ದರೆ ಮಜ ಮರುವುದಿಲ್ಲ. ಮದ್ಯ ಆಗಾಗ ತಗ್ಗು ದಿನ್ನೆಗಳು ಹಂಪ್ಸಗಳು ಬಂದ್ರೆನೆ ಮಜ ಇರೋದು. ಹೈವೆನಲ್ಲಿ ಹಂಪ್ಸ ಯಾಕೆ ಇರ್ತಾವೆ ಹೇಳಿ ಬೈಪಾಸ್ ನಲ್ಲಿ. ವೇಗವಾಗಿ ಹೋಗುವ ವಾಹನ ಸ್ವಲ್ಪ ನಿದಾನವಾಗಲಿ ಯಾಕೆಂದರೆ ಅಪಗಾತವಾಗಬಹುದೆಂಬ ಮುನ್ನಚ್ಚರಿಕೆ ಅಷ್ಟೆ. ಇಲ್ಲಿ ಗಮನಿಸಬೇಕಾದದ್ದು ಏನು ಹಂಪ್ಸಗಳು ನಮ್ಮ ಒಳ್ಳೆಯದಕ್ಕೆ ಅಂದಂಗಾಯಿತು. ಅದನ್ನ ತಿಳಿಯದೆ ಹಂಪ್ಸಗಳನ್ನ ಹಂಪ್ಸಹಾಕಿದವರನ್ನ ಬೈತಾನೆ ಇರ್ತೀವಿ ಅವರು ತಮ್ಮ ಕೆಲಸ ಮಾಡಿದ್ದಾರೆ ಅದು ಪ್ರಯಾಣಿಸುವವರಿಗೆ ಒಳ್ಳೆಯದೇ ಆಗಬಹುದು ಕೆಡುಕು ಆಗಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ. ಆದರೆ ನಾವು ಯಾವ ರೀತಿಯಾಗಿ ಹಂಪ್ಸ ದಾಟುತ್ತೇವೆ ಎಂಬುದು ಇಲ್ಲಿ ಮುಖ್ಯ ನಿದಾನವಾಗಿ ದಾಟಿದರೆ ಮತ್ತೆ ಟಾರು ಹಾಕಿದ ಹೈವೆ, ಸ್ಪೀಡಾಗಿ ದಾಟಿದರೆ ಟಾರೆ ಇಲ್ಲದ ಭಗವಂತನ ಹೈವೆ.


ಹುಸ್ಸೇನ್....